ದೈವಾರಾಧನೆ ತುಳುನಾಡಿನ ಮೂಲ ಬೇರು. `ಸಾರತ್ತೊಂಜಿ ಭೂತಲು' ಎಂದು ಹೇಳುವಂತೆ ಸಾವಿರಕ್ಕೂ ಮಿಕ್ಕಿ ಒಂದು ಎಂಬಂತೆ ದೈವಗಳು ಇಲ್ಲಿವೆ. ಈ ಭೂತಾರಾಧನೆಯ ಇತಿಹಾಸ, ಪಾಡ್ದನಗಳಲ್ಲಿ ಹೇಳಲಾದ ಕುರುಹುಗಳನ್ನು ಹುಡುಕುತ್ತಾ ಹೊರಟರೆ ತುಳುನಾಡಿನ ಅಮೂಲ್ಯವಾದ ಇತಿಹಾಸವೇ ನಮ್ಮ ಕಣ್ಣೆದುರು ತೆರೆದುಕೊಳ್ಳುತ್ತಾ ಹೋಗುತ್ತದೆ.
ಸುರತ್ಕಲ್ ಪೇಟೆಯಲ್ಲಿ ನೆಲೆ ನಿಂತಿರುವ ಕಾಂತೇರಿ ಧೂಮಾವತಿ ದೈವಸ್ಥಾನ ಇದಕ್ಕೊಂದು ನಿದರ್ಶನವಾಗಿದೆ. ಬಂಟ ಮನೆತನದ ಗೊಜ್ಜರ ಬನ್ನಾಯ ಬಳಿಯ ಮೂಲವನ್ನೂ ಇದರೊಂದಿಗೆ ಅಧ್ಯಯನ ಮಾಡಬಹುದಾಗಿದೆ.
ತುಳುನಾಡಿನಲ್ಲಿ ಆರಾಧಿಸಲ್ಪಡುತ್ತಿರುವ ಜುಮಾದಿಯ ವಿವಿಧ ಪ್ರಕಾರಗಳಲ್ಲಿ ಕಾಂತೇರಿ ಧೂಮಾವತಿ ಇಲ್ಲಿಯದಾಗಿದ್ದು, ಇದು ಜುಮಾದಿ ದೈವದ ಆದಿಸ್ಥಾನವೆಂದೇ ಕರೆಯಲ್ಪಡುತ್ತಿದೆ. ಅಷ್ಟಮಂಗಳ ಪ್ರಶ್ನೆಯಲ್ಲಿಯೂ ಈ ವಿಚಾರ ವಿಮಶರ್ೆಗೆ ಬಂದಿದೆ. `ಸಾರಾಳ ಪಟ್ಟ', `ಕಾವರ ಸ್ಥಾನ', `ದೇವುಪೂಂಜ ಶ್ರೀ ಧೂಮಾವತಿ ದೈವಸ್ಥಾನ' ಎಂದೂ ಇದನ್ನು ಕರೆಯಲಾಗುತ್ತಿದೆ. `ಕಾಂತಣ್ಣ ಅತಿಕಾರಿ' ಎಂಬ ತುಳುನಾಡಿನ ಐತಿಹಾಸಿಕ ವ್ಯಕ್ತಿಯ ಹೆಸರಿನೊಂದಿಗೆ ಜೋಡಿಸಲ್ಪಟ್ಟು `ಕಾಂತೇರಿ ಜುಮಾದಿ' ಎಂದೂ ದೈವನ್ನು ಕರೆಯಲಾಗುತ್ತಿದೆ.
ಪಣಂಬೂರು ಮಾಗಣೆಯ ದೈವವಾದ ಕಾಂತೇರಿ ಜುಮಾದಿ ದೈವಸ್ಥಾನವು ನವಮಂಗಳೂರು ಬಂದರು ನಿಮರ್ಾಣವಾದಾಗ ಸುರತ್ಕಲ್ ಪೇಟೆಗೆ ಸ್ಥಳಾಂತರಗೊಂಡಿತು. ನಂತರ 26 ವರ್ಷಗಳ ಬಳಿಕ 1992ರಲ್ಲಿ ಅಷ್ಟಮಂಗಲ ಪ್ರಶ್ನೆಯ ಪ್ರಕಾರ ದೈವಸ್ಥಾನ ಜೀಣರ್ೋದ್ಧಾರಗೊಂಡಿತು. ಈ ಸಂದರ್ಭದಲ್ಲಿ ನಾಗದೇವರು, ಮೈಸಂದಾಯ, ಅಣ್ಣಪ್ಪ ಪಂಜುಲರ್ಿ ಗುಡಿಗಳನ್ನು ಪ್ರತ್ಯೇಕವಾಗಿ ನಿಮರ್ಿಸಿ, ಭಂಡಾರ ಚಾವಡಿ, ಮಂಚಗಳನ್ನು ರಚಿಸಿ ಕೆರೆ, ಬಾವಿ, ಗೋಪುರ ರಚನಾ ಕಾರ್ಯಗಳು ನಡೆದು ದೈವದ ಪುನರ್ ಪ್ರತಿಷ್ಠಾಪನಾ ಬ್ರಹ್ಮಕಲಶೋತ್ಸವವು ಜರಗಿತು. ಫೆ. 19 ರಂದು ಪಣಂಬೂರು ಕಾವರ ಮನೆ ಪಿ.ಟಿ.ರೈ ಇವರಿಗೆ ಪಣಂಬೂರು ಕಾವರ ಪಟ್ಟ ಪ್ರಧಾನ ಮತ್ತು ಅನ್ನೋಡಿ ಗುತ್ತಿನ ಕುಟುಂಬಿಕರಾದ ಪ್ರಭಾಕರ ರೈ ಇವರಿಗೆ ಗಡಿ ಪ್ರಧಾನ ಕಾರ್ಯಕ್ರಮ ವಿಧಿವತ್ತಾಗಿ ಜರಗಲಿದೆ. 21 ರಂದು ಕಾಂತೇರಿ ಧೂಮಾವತಿ ದೈವಗಳ ಮತ್ತು ಸರಾಳ ಧೂಮಾವತಿ ದೈವಗಳ ನೇಮೋತ್ಸವವೂ ನಡೆಯಲಿದೆ.
ಇತಿಹಾಸ :
ಕಾಂತೇರಿ ಜುಮಾದಿಯು ಪಣಂಬೂರಿಗೆ ಬಂದ ಕತೆ ರೋಚಕವಾಗಿದೆ. ಸೋಮೇಶ್ವರದ ಬಳಿ ಇದ್ದ ಉಚ್ಚಿಲದ ಕೋಟೆಯಲ್ಲಿ ಗೊಜ್ಜರ ಭಾರಿ ಬನ್ನಾಯ ವಂಶದ ಕುಟುಂಬದವರು ಅಧಿಕಾರದಲ್ಲಿದ್ದರು. ಯಾವುದೋ ಕಾರಣಕ್ಕಾಗಿ ಇವರ ಸಂತಾನ ನಶಿಸುತ್ತಾ ಬಂದಾಗ ವಂಶದ ಕೊನೆಯ ಕುಡಿಯಾದ ದುಗ್ಗು ಕೊಂಡ ಬಲ್ಲಾಳ್ತಿಯು ವಂಶನಾಶವಾಗುತ್ತಿರುವ ಮತ್ತು ದೈವಗಳನ್ನು ಆರಾಧಿಸಲು ಉತ್ತರಾಧಿಕಾರಿಗಳು ಇಲ್ಲದ ಬಗ್ಗೆ ಚಿಂತಾಕ್ರಾಂತಳಾಗಿದ್ದಳು. ಬಲ್ಲಾಳ್ತಿಗೆ ಸ್ವಪ್ನದಲ್ಲಿ ಕಾಣಿಸಿಕೊಂಡ ಜುಮಾದಿ ದೈವವು `ಚಿಂತೆ ಮಾಡಬೇಡ ಬಲಿ ನೇಮಗಳನ್ನು ಕೊಟ್ಟು ನಾವೆ (ಪಡಾವು) ಯೊಂದನ್ನು ರಚಿಸಿ ಅದರಲ್ಲಿ ದೈವದ ಚಿನ್ನಾಭರಣ, ಮೊಗ ಇತ್ಯಾದಿ ಸೊತ್ತುಗಳನ್ನು ಇಟ್ಟು ಸಮುದ್ರದಲ್ಲಿ ತೇಲಿ ಬಿಡು ಅದು ನಿನ್ನ ವಂಶಸ್ಥರಿಗೇ ಸಿಗಲೆಂದು ಪ್ರಾರ್ಥನೆ ಮಾಡು' ಎಂದು ಹೇಳಿತು. ಅದರಂತೆ ಬಲ್ಲಾಳ್ತಿಯು ನಾವೆ ಕಟ್ಟಿಸಿ ಅದರಲ್ಲಿ ಏಳು ತೆರೆಪಟಗಳನ್ನು ರಚಿಸಿ ಅದರ ಕೆಳಭಾಗದಲ್ಲಿ ಚಿನ್ನಾಭರಣಗಳನ್ನು ತುಂಬಿಸಿ ಮೇಲ್ಬಾಗದಲ್ಲಿ ಜುಮಾದಿಯ ಮೊಗ, ಮಣಿ ಕಡ್ಸಲೆ, ಎದೆಕಟ್ಟು, ತಲೆಪಟ್ಟ, ಬೀಸಣಿಗೆ, ಗಗ್ಗರ, ಒಡ್ಯಾಣ, ಕೂಚಿ ಮತ್ತು ತುಳುನಾಡಿನ ಇತಿಹಾಸ ಪುರುಷ ದೇವು ಪೂಂಜನ ರುಂಡದ ಪ್ರತಿಮೆಯನ್ನು ಇಟ್ಟು ಸಮುದ್ರದಲ್ಲಿ ತೇಲಿ ಬಿಟ್ಟಳು.
ನಾವೆ ಸಮುದ್ರದಲ್ಲಿ ಪ್ರಕಾಶಮಾನವಾಗಿ ತೇಲುತ್ತಾ ಹೆಜಮಾಡಿ ತನಕ ಸಾಗಿತು. ಮೂಲ್ಕಿಯಲ್ಲಿ ಕಾಣಿಸಿಕೊಂಡಿತು. ಅದನ್ನು ಹಿಡಿಯಲು ಮಾಡಿದ ಪ್ರಯತ್ನ ವಿಫಲವಾಗಿ ಕೊನೆಗೆ ಪಣಂಬೂರಿನ ಕೂರಿಕಟ್ಟದ ಕಡಲ ಕಿನಾರೆಗೆ ತಲುಪಿತು. ಪಣಂಬೂರು ಶ್ರೀನಂದನೇಶ್ವರ ದೇವಸ್ಥಾನವನ್ನು ಕಟ್ಟಿಸಿದ ರಾಜಮನೆತದ ವಂಶಜರಾದ ಮಂಜು ಹೆಗ್ಡೆ (ಮಂಜು ಕಾವ) ಎಂಬವರಿಗೆ ದೈವವು ಸ್ವಪ್ನದಲ್ಲಿ ಕಾಣಿಸಿಕೊಂಡು ನಾವೆಯನ್ನು ವಶಪಡಿಸಿಕೊಂಡು ದೈವವನ್ನು ಪ್ರತಿಷ್ಠಾಪಿಸಲು ಹೇಳಿತು. ಮಂಜು ಕಾವರು ನಾವೆಯನ್ನು ವಶಪಡಿಸಿಕೊಂಡು ಅದರ ಮೇಲ್ಭಾಗದಲ್ಲಿದ್ದ ಆರಾಧನೀಯ ಮೊಗ ಮೂತರ್ಿಗಳನ್ನು ತೆಗೆಯುತ್ತಿದ್ದಂತೆ ನಾವೆಯು ಮುಳುಗುತ್ತಾ ಹೋಯಿತು. ಅದರ ತಳಭಾಗದಲ್ಲಿದ್ದ ಚಿನ್ನಾಭರಣಗಳನ್ನು ತೆಗೆಯಲು ಸಾಧ್ಯವಾಗದೆ ನಾವೆಯು ಮುಳುಗಿ ಹೋಯಿತು.
ಪ್ರಶ್ನೆಯಲ್ಲಿ ತಿಳಿದುಬಂದಂತೆ ತೆಂಗಿನಕಾಯಿ ಹಾರಿಸಿ ಅದು ಬಿದ್ದ ಕಾವರ ಮನೆತನದ ಜಾಗದಲ್ಲಿ ಜುಮಾದಿಯ ಗುಡಿ ನಿಮರ್ಿಸಲಾಯಿತು. ದೇವು ಪೂಂಜನ ರುಂಡದ ಪ್ರತಿಮೆಯ ಸಹಿತ ಎಲ್ಲಾ ಮೂತರ್ಿಗಳನ್ನು ಇಲ್ಲಿ ಇಡಲಾಯಿತು. ಇದಕ್ಕೆ 'ಸಾರಾಳ ಪಟ್ಟ' ಎಂದು ಕರೆಯಲಾಯಿತು. ಪಣಂಬೂರು ಕಾವರಿಗೆ ಮಾಗಣೆಯ ಪಟ್ಟ ಕಟ್ಟಿ `ಪಣಂಬೂರು ಕಾವ'ರೆಂದು ನಾಮಕರಣ ಮಾಡಲಾಯಿತು. ಶ್ರೀ ಕಾಂತೇರಿ ಧೂಮಾವತಿ ಸ್ಥಾನ ಎಂಬ ಹೆಸರಿನಿಂದ ದೈವವು ಅಭಯ ನೀಡಲಾರಂಭಿಸಿತು. ಮುಂದೆ ನವಮಂಗಳೂರು ಬಂದರು ನಿಮರ್ಾಣಕ್ಕಾಗಿ ಈ ಗುಡಿಯನ್ನು ಕೆಡವಲು ಸಾಧ್ಯವಾಗದೆ ಹಲವಾರು ಕಷ್ಟ ನಷ್ಟಗಳನ್ನು ಎದುರಿಸಬೇಕಾಯಿತು.
ಕಾವರ ಕಂಬಳಕ್ಕೆ
ಕಾಟಿಪಳ್ಳದ ಕಾಟಿ
ಕಾವರ ಪಣಂಬೂರು ಕಂಬಳಕ್ಕೆ ಕಾಟಿಪಳ್ಳ ಕಾಟಿಗಳು ಕಾವರ ಕ್ರಮಬದ್ಧವಾದ ಕರೆಗೆ ಓಗೊಟ್ಟು ಅವರ ಹಟ್ಟಿಯಲ್ಲಿ ಮುಂಚಿನ ದಿನ ರಾತ್ರಿ ಬಂದು ಸೇರುತ್ತಿತ್ತಂತೆ. ಅವುಗಳಿಗೆ ಯಾವುದೇ ನಿರ್ಬಂಧವನ್ನು ಹೇರಬಾರದು. ಮರುದಿನ ವಿಜೃಂಭಣೆಯಿಂದ ಅವುಗಳನ್ನು ಕಂಬಳ ಗದ್ದೆಗೆ ಇಳಿಸಿ, ಎರಡು ಕಾಟಿಗಳನ್ನು ಜತೆಯಾಗಿಸಿ ನೊಗವೊಂದನ್ನು ಅವುಗಳ ಕತ್ತಿನ ಮೇಲೆ ಇಡಬೇಕು. ಕಾಟಿಗಳು ಕಂಬಳ ನೆರವೇರಿಸುತ್ತಿದ್ದವು. ಸಂಜೆ ಕರೆತಂದು ಸ್ನಾನ ಮಾಡಿಸಿ, ಆರಾಧಿಸಿ ಕೊಟ್ಟಿಗೆಯಲ್ಲಿ ಬಿಡಬೇಕು. ಆ ರಾತ್ರಿ ಅವುಗಳು ತನ್ನಷ್ಟಕ್ಕೆ ಕಾಟಿಪಳ್ಳಕ್ಕೆ ಹಿಂತಿರುಗುತ್ತಿದ್ದವು. ಓರ್ವ ವ್ಯಕ್ತಿ ಸುಂದರವಾದ ಕಾಟಿಯೊಂದನ್ನು ಕಟ್ಟಿ ಹಾಕಿದ. ನಂತರ ಕಾಟಿಗಳು ಬರುವುದು ನಿಂತು ಹೋಯಿತಂತೆ. ಪಣಂಬೂರು ನಿವಾಸಿಗಳು ಕಾಟಿಗಳು ಅಲೆದಾಡುತ್ತಿದ್ದ ಕಾಟಿಪಳ್ಳಕ್ಕೆ ನಿರ್ವಸಿತರಾಗಿ ಹೋದದ್ದು ವಿಶೇಷ. ಕಾಟಿಗಳ ಕತ್ತಿನ ಮೇಲೆ ಇಡಲಾಗು ತ್ತಿದ್ದ ನೊಗವು ಈಗ ಸುರತ್ಕಲ್ ಕಾಂತೇರಿ ಧೂಮಾವತಿ ದೈವಸ್ಥಾನದ ಭಂಡಾರದ ಮನೆಯಲ್ಲಿದೆ.
ಅಗೋಳಿ ಮಂಜಣ್ಣನ ಸಾಹಸ:
ಮೂಲ್ಕಿ ಸೀಮೆಗೆ ಬಂದ ನಾವೆಯನ್ನು ವಶಪಡಿಸಿಕೊಳ್ಳುವುದಕ್ಕೆ ವಿಫಲರಾದ ಮೂಲ್ಕಿಯ ಯುವಕರು ಪಣಂಬೂರು ಕಂಬಳ ವನ್ನು ಕೊಂಡೊಯ್ಯಲು ಸಿದ್ಧವಾಗಿ ಬಂದಾಗ ಅವರನ್ನು ವೀರ ಅಗೋಳಿ ಮಂಜಣ್ಣ ಎದುರಿಸಿದ/ ಸೋತ ಅವರು ಕಂಬಳ ಗದ್ದೆಯ ನಾಲ್ಕು ಮೂಲೆಯ ಮಣ್ಣನ್ನು ಪಣಂಬೂರಿನಿಂದ ಮೂಲ್ಕಿಗೆ ಕೊಂಡೊಯ್ದು ಕಂಬಳ ನಿಮರ್ಿಸಿದರು. ಇದರಿಂದಾಗಿ ಅಲ್ಲಿಗೆ ಪಡುಪಣಂಬೂರು ಎಂಬ ಹೆಸರು ಬಂತು ಎಂದು ಹೇಳಲಾಗುತ್ತಿದೆ.
ನಾವೆಯಲ್ಲಿ ತೇಲಿಬಂದ ಜುಮಾದಿಯ ಮೂತರ್ಿಯನ್ನು ಸುರತ್ಕಲ್ನಲ್ಲಿ ಪ್ರತಿಷ್ಠಾಪಿಸಲಾಗಿದ್ದು. ದೇವುಪೂಂಜನ ರುಂಡ, ಸಿರಿಗಳ ಪ್ರತಿಮೆ, ಮೊಗ ಮುಂತಾದ ವಸ್ತುಗಳನ್ನು ಸುರತ್ಕಲ್ನ ಬಂಡಾರ ಮನೆಯಲ್ಲಿ ಈಗಲೂ ನಾವು ಕಾಣಬಹುದು.